ಮೋಸದ ಜಾಲ ನಮ್ಮ ಸುತ್ತಲೂ ನಡೆಯುವ ಮೋಸಗಳು.

ಸ್ನೇಹಿತರೇ ನಮಸ್ಕಾರ, ವಿ ಸೂಚನೆ ; ಈ ಲೇಖನ ಪೂರ್ತಿ ಓದಿ ಇಷ್ಟ ಆದ್ರೆ ಕಾಮೆಂಟ್ ಮಾಡುವುದನ್ನು ಮರೆತು ಬಿಡಬೇಡಿ.

 

ಮೋಸಗಳು ಹಲವಾರು ರೀತಿಯಲ್ಲಿ ನಡೆಯುತ್ತವೆ. ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರೂ ಇದ್ದೆ ಇರುತ್ತಾರೆ. ಇದು ಕಲಿಯುಗ ಈ ಸದ್ಯದ ಜಗತ್ತಿನಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಕೂಡ, ಏನೇ ಮಾಡಿದ್ರು ಸ್ವಲ್ಪ ನಾದ್ರೂ ಮೋಸ ಇದ್ದೆ ಇರುತ್ತೆ. ಹಾಗಂತ ಅದು ಅತಿ ಕಡಿಮೆ ಪ್ರಮಾಣದಲ್ಲಿದ್ದರೆ ಅದು ಬಹಳ ಒಳ್ಳೆಯದು. ಇಲ್ಲದಿದ್ದರೆ ಅದು ಈ ಸಮಾಜಕ್ಕೆ ಮಾರಕವಂತೂ ಹೌದು. ಈ ಲೇಖನ ಓದಿದ ಬಳಿಕ ನೀವು ಸ್ವಲ್ಪವಾದ್ರೂ ಎಚ್ಚರ ಆದ್ರೆ ಅದೇ ಸಾರ್ಥಕ.

ಪ್ರಶ್ನೆ : ಯಾಕೆ ನಾನು ಪದೇ ಪದೇ ಮೋಸ ಹೋಗುತ್ತೇನೆ ?

ಉತ್ತರ :- ನೀವು ಅವಿದ್ಯಾವಂತರಾಗಿರಬಹುದು ಅಥವಾ ನೀವು ಯಾವುದೇ ವಿಷಯದಲ್ಲಿ ತಜ್ಞರ ಅಭಿಪ್ರಾಯ ಕೇಳದೇ,  ಅತವ ಸ್ಥಳೀಯರನ್ನು ವಿಚಾರಿಸದೆ , ಆ ಕ್ಷೇತ್ರದಲ್ಲಿ ತಿಳಿವಳಿಕೆ ಇರುವಂತರನ್ನು ಸಂಪರ್ಕ ಮಾಡದೇ, ನೀವೇ ಸ್ವಂತವಾಗಿ ನಿರ್ಧಾರಗಳನ್ನೂ ತೆಗೆದುಕೊಂಡು ಬಿಟ್ಟರೇ ಅನಾಹುತ ಆಗುವುದಂತೂ 1೦೦%

ಪ್ರಶ್ನೆ : ಯಾವ ಯಾವ ರೀತಿ ಮೋಸಗಳು ನಡೆಯುತ್ತವೆ ?

ಮೊದಲನೆಯದಾಗಿ ಆನ್ಲೈನ್ ಮೋಸಗಳು ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿ ಬಿಟ್ಟಿವೆ. ಅದರಲ್ಲಿಯೂ ಈ ಮೊಬೈಲ್ ಗಳು ಬಂದಾದ ಮೇಲೆ ಮೋಸ ಮಾಡುವುದು ಈಗ ಮತ್ತಷ್ಟು ಸುಲಭವಾಗಿಬಿಟ್ಟಿದೆ.  ನಿಮಗೆ ಇಂಗ್ಲಿಷ್ ಬರೆದೆ ಇದ್ದರೇ ಅದು ಮೋಸಗಾರರಿಗೆ ಮತ್ತಷ್ಟು ಅನುಕೂಲ ಮಾಡುತ್ತದೆ. ಆನ್ಲೈನ್ ನಲ್ಲಿ ADVERTISEMENTS  ಅಂತೂ ಈಗ ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಯೌಟ್ಯೂಬ್ ಗೂಗಲ್ ಯಾವುದೇ ವೆಬ್ಸೈಟ್ ಗಳಲ್ಲಿ ಎಲ್ಲ ಕಡೆ ನೋಡಬಹುದು.

ಇಂತಹ ADVERTISEMENTS ( ಜಾಹಿರಾತುಗಳು ) 100 ರಲ್ಲಿ 95% ಸುಳ್ಳುಗಳಿಂದ ತುಂಬಿರುತ್ತವೆ. ಒಳ್ಳೆಯ ಜಾಹಿರಾತುಗಳು ಕಾಣಸಿಗುವುದು ವಿರಳ. ಹಾಗಂತ ಎಲ್ಲ ಜಾಹಿರಾತುಗಳು ಕೆಟ್ಟವೇನೂ ಅಲ್ಲ. ಅದರ ಬುಡಸಮೇತ ಅಧ್ಯಯನ ಮಾಡಿದಾಗ ಮಾತ್ರ ಅದರ ನಿಜ ಸ್ವರೂಪ ಕಂಡು ಬರುತ್ತದೆ.

ನಾವಂತೂ ಈಗ ಗೂಗಲ್ ಅನ್ನೇ ಹೆಚ್ಚಾಗಿ ನಂಬಿದ್ದೇವೆ. ಯಾವುದೇ ಅಂಗಡಿಗಳಲ್ಲಿ ಭೇಟಿ ಮಾಡುವ ಮೊದಲು ಗೂಗಲ್ REVIEWS ನೋಡುತ್ತೇವೆ. ಆದರೆ ಬಹಳಷ್ಟು ಮೋಸಗಾರರಿಗೆ ಇದು ಚೆನ್ನಾಗಿ ತಿಳಿದಿರುತ್ತದೆ.  ಅವರು ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸರು ಚಾಪೆ ಕೆಳಗೆ ತೂರಿದರೆ ಕಳ್ಳರು ರಂಗೋಲಿ ಕೆಳಗೆ ತೂರುತ್ತಾರೆ ಎಂಬಂತೆ ಅಂಗಡಿಕಾರರು ತಮಗೆ ಪರಿಚಯವಿರುವವರಿಂದ ಒಳ್ಳೆಯ REVIEWS ಮಾಡಿಸಿರುವ ಸಾಧ್ಯತೆ ಗಳು ಇರುತ್ತವೆ. ತಳ್ಳಿಹಾಕುವಂತಿಲ್ಲ.

ನಂತರ ತಮ್ಮ ಗ್ರಾಹಕರಿಗೆ ದುಡ್ಡಿನ ಆಮಿಷ ಒಡ್ಡಿ ಹೆಚ್ಚಿನ RATINGS ಮತ್ತು REVIEWS ಮಾಡಿರುವ ಸಾಧ್ಯತೆ ದಟ್ಟವಾಗಿರುತ್ತವೆ.

ಪ್ರಶ್ನೆ : ಹಾಗಾದ್ರೆ ಇಂತಹ ಆನ್ಲೈನ್ ವಂಚನೆಗಳಿಂದ ಹೇಗೆ ನಮ್ಮನ್ನು ರಕ್ಷಿಸಿಕೊಳ್ಳುವುದು?

ನೀವು ಗೂಗಲ್ REVIEWS ನೋಡುತ್ತೀರಾ ಎಂದರೆ ಅದನ್ನು ಹಿಂಬದಿಯಿಂದ ನೋಡಿ ಅಂದರೆ LOW ಟು HIGH ಫಿಲ್ಟರ್ ಮಾಡಿಕೊಂಡು ನೋಡಿ ಯಾಕಂದ್ರೆ ನೆಗಟಿವ್ REVIEWS ನಿಮಗೆ ಮೊದಲು ಕಾಣುವುದಿಲ್ಲ. ಇಲ್ಲೇ ಇರುವುದು ನಿಜ ಸತ್ಯ. ಯಾವ ಜನರು ಮೋಸ ಹೋಗಿರುತ್ತಾರೋ ಅಂತವರ ಅಭಿಪ್ರಾಯಗಳು ನಿಮಗೆ ಈ ರೀತಿ ನೋಡಿದಾಗ ಮಾತ್ರ ಕಾಣುತ್ತವೆ.  ಅಲ್ಲಿಯೂ ಕೂಡ ಯಾವುದೇ ನೆಗೆಟಿವ್ ಮಾಹಿತಿ ಇಲ್ಲದಿದ್ದರೆ ನೀವು ಸುತ್ತಲಿನ ಜನ ಸಾಮಾನ್ಯರನ್ನು ಮಾತನಾಡಿಸಿ ಅಭಿಪ್ರಾಯವನ್ನು ಸಂಗ್ರಹಿಸಿ ಮುಂದೆ ಹೋಗುವುದು ಉತ್ತಮ. ನಿಮಗೆ ಮೋಸದ ಬಗ್ಗೆ ಅರಿವು ಇದ್ರೆ ಬೇರೆಯವರು ಮೋಸ ಹೋಗದಂತೆ ತಡೆಯಲು ನೀವು reviews ಹಾಕಬಹುದು ಅಥವಾ ಯಾರಾದರೂ ಬೇಕಂತಲೇ ಮೋಸಗಾರರಿಗೆ ಒಳ್ಳೆಯ reviews ನೀಡಿದ್ದರೇ ಅಧನ್ನು flag ಅಥವಾ ರಿಪೋರ್ಟ್ ಮಾಡಿ. ಆ option ಅಲ್ಲಿಯೇ ಇರುತ್ತದೆ ಮೇಲೆ ಕೆಳಗೆ ನೋಡಿರಿ. ಇದು ನಿಮ್ಮ ಕರ್ತವ್ಯವು ಹೌದು.

ಗೂಗಲ್ ನಲ್ಲಿ ರಿವರ್ಸ್ ಸರ್ಚ್ ಮಾಡಿ ಹೇಗೆಂದರೆ ಒಂದು ಕಂಪನಿ ಇದೆ ಎಂದಿಟ್ಟುಕೊಳ್ಳಿ ಉದಾಹರಣೆಗೆ ಜಿಜೋ ಎಂಬ ಕಂಪನಿ ಇದೆ. ಅದರ ಬಗ್ಗೆ ನೇರವಾಗಿ ಹುಡುಕಾಡಿದರೆ ಕೇವಲ ಒಳ್ಳೆಯ ಮಾಹಿತಿಗಳು ಬರುವಂತೆ ಆ ಕಂಪನಿಗಳು ಮಾಡಿರುವ ಸಾಧ್ಯತೆಗಳು ಇವೆ.

ಅದಕ್ಕಾಗಿ ನೀವು ಜಿಜೋ fraud , ಜಿಜೋ scam , ಜಿಜೋ negative reviews, ಜಿಜೋ customers opinions ಇದೆ ತರಹ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿ ನೋಡಿ. ಯಾವುದೇ ಕಂಪನಿಯು ಯಾವುದೇ products ಅಥವಾ ಸೇವೆಗಳನ್ನು  ಗಳನ್ನೂ ಅತಿ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ , ಎಂದಾದರೆ ಅದರಲ್ಲಿ ಮೋಸ ಆಗುವುದು ಬಹು ಹೆಚ್ಚಳವಾಗಿರುತ್ತದೆ.

ನಿಜವಾದ ಕಂಪನಿಗಳು ಅಷ್ಟು ಕಡಿಮೆ ಬೆಲೆಯಲ್ಲಿ ಸೇವೆ ಅಥವಾ ಉತ್ಪನ್ನಗಳನ್ನು ನೀಡುವುದಕ್ಕೆ ಸಾಧ್ಯವಾಗುವುದಿಲ್ಲ.

ಮುಂದಿನ ದಿನಗಳಲ್ಲಿ ಈ ರೀತಿಯ ಲೇಖನಗಳನ್ನೂ ಬರೆದು ನಿಮಗೆ ತಲುಪಿಸಲು ತುಂಬಾ ಆಸೆಯಿದೆ. ಪ್ರಯತ್ನಿಸುತ್ತೇನೆ ನಿಮಗೆ ಮಾಹಿತಿ ಇಷ್ಟ ಆದ್ರೆ

ನಮ್ಮ APP ಅನ್ನು ಪ್ಲೇಸ್ಟೋರ ನಲ್ಲಿ ಹೆಚ್ಚಿಗೆ ರೇಟಿಂಗ್ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಅದರಲ್ಲೇ ನಿಮ್ಮ ಅಭಿಪ್ರಾಯ ತಿಳಿಸಬಹುದು.