ನಮಸ್ಕಾರ ಪ್ರಜೆಗಳೇ , ರಾಜ್ಯ ರಾಜಕೀಯದಲ್ಲಿ ಇನ್ನೇನು ಚುನಾವಣೆ ಶೀಘ್ರದಲ್ಲೇ ನಡೆಯಲಿದೆ. ಬಿಜೆಪಿಯ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಡುವೆ ಮಾತಿನ ಚಕಮಕಿ ಬಹಳ ಜೋರಾಗಿದೆ.
ನಾಲ್ಕು ದಿನಗಳ ಹಿಂದೆ ಬಹಿರಂಗ ಸಭೆಯಲ್ಲಿ ರಮೇಶ್ ಜಾರಕಿಹೊಳಿಯವರು ಪ್ರತಿ ವೋಟಿಗೆ 6000 ರೂಪಾಯಿ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗಿಂತ 10 ಕೋಟಿ ರೂ ಹೆಚ್ಚು ಹಣ ಖರ್ಚು ಮಾಡುವುದಾಗಿ ತಿಳಿಸಿದ್ದರು.
ಮೊದಲೆಲ್ಲ 1 ವೋಟಿಗೆ 500 ರೂಪಾಯಿ, 1000 ರೂಪಾಯಿ ನೀಡುತ್ತಿದ್ದರು. ನಂತರ ಅದು 2000 ರೂಪಾಯಿಗಳಿಗೆ ಏರಿಕೆಯಾಯಿತು, ದಿನಗಳು ಕಳೆದಂತೆ ಹಣದುಬ್ಬರ ಹೆಚ್ಚಾದಂತೆ ಈಗ ಅದು 6000 ರೂಪಾಯಿಗಳಿಗೆ ಬಂದು ನಿಂತಿದೆ.
ನಮ್ಮ ಕರ್ನಾಟಕದ ಜನಸಂಖ್ಯೆ ಸುಮಾರು 7 ಕೋಟಿ ಅಂದಾಜು ಇರಬಹುದು. ಅದರಲ್ಲಿ ಮಕ್ಕಳನ್ನು ಹೊರತುಪಡಿಸಿದರೆ 5 ಕೋಟಿ ಜನ ಮತದಾರರಿದ್ದಾರೆ. ಪ್ರತಿಯೊಬ್ಬರಿಗೆ 6000 ರಂತೆ 5 ಕೋಟಿ ಜನರಿಗೆ ಅಂದರೆ 30 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.
ಹಾಗಾದ್ರೆ 1 ವೋಟಿನ ನಿಜವಾದ ಬೆಲೆ ಎಷ್ಟು ? ಅಂದ್ರೆ
ಕರ್ನಾಟಕದ 1 ವರ್ಷದ ಆಯವ್ಯಯ budget 2.5 ಲಕ್ಷ ಕೋಟಿ ಒಂದು ಸರ್ಕಾರ ಅಧಿಕಾರಕ್ಕೆ ಬಂದರೆ 5 ವರ್ಷ ಅಧಿಕಾರ ನಡೆಸುತ್ತದೆ ಅಂದರೆ ಒಟ್ಟು 10 ಲಕ್ಷ ಕೋಟಿ.
ಹಾಗಾದ್ರೆ ಪ್ರತಿಯೊಬ್ಬರಿಗೂ ಹಂಚಿದರೆ ಬರುವ ಹಣ
2 ಲಕ್ಷ ರೂಪಾಯಿಗಳು.
ನಮ್ಮಪ್ರಜೆಗಳು ಎಚ್ಚೆತ್ತು ಕೊಳ್ಳಬೇಕಾಗಿ ವಿನಂತಿ. ದಯವಿಟ್ಟು ಎಲ್ಲರೂ 2 ಲಕ್ಷ ಹಣ ಕೊಟ್ಟವರಿಗೆ ಮತ ಹಾಕಿ ಪ್ರಜೆಗಳೇ, ಹಾಗೆ ರಸ್ತೆಗಳು, ಶಾಲೆಗಳು, ಬಸ್ ನಿಲ್ದಾಣಗಳನ್ನು, ಆಸ್ಪತ್ರೆಗಳನ್ನು ನೀವೇ ಸ್ವಂತವಾಗಿ ಕಟ್ಟಿಸಿ ಕೊಂಡು ಹಾಯಾಗಿರಿ.
ಯಾಕೆ ರಾಜಕೀಯಕ್ಕೆ ಜನ ಇರುವೆಗಳಂತೆ ಸುತ್ತುತ್ತಾರೆ ಗೊತ್ತಾಯ್ತ ? ಯಾರದ್ದೋ ದುಡ್ಡು ಯಲಮ್ಮನ ಜಾತ್ರೆ ಮಾಡಬಹುದು. ಇದ್ರಲ್ಲಿ ಕಷ್ಟ ಪಡೋವರು ಯಾರು ಅಂದ್ರೆ ದಿನಂಪ್ರತಿ ದುಡಿದು ಸರ್ಕಾರಕ್ಕೆ Tax ಕಟ್ಟುವವರು. 10 ಲಕ್ಪ ಕೋಟಿಗಳನ್ನ ನಾವು ಸರ್ಕಾರಕ್ಕೆ ಹೇಗೆ ಖರ್ಚು ಮಾಡಬೇಕೆಂದು ನಮ್ಮ ಮತಗಳ ಮೂಲಕ ಅಧಿಕಾರ ಕೊಡುತ್ತೇವೆ.
ನಾವೇ ದುಡಿದ ಹಣವನ್ನ ನಾವೇ ಸರಿಯಾಗಿ ಬಳಸದೆ ವ್ಯರ್ಥ ಮಾಡುವ ಜನ ನಾವು. ಅಂತಹದರಲ್ಲಿ ಮತ್ತೊಬ್ಬರ ಹಣವನ್ನ ಹೇಗೆ ಬಳಸುತ್ತಾರೆ ನಮ್ಮ ರಾಜಕಾರಣಿಗಳು ?
ಫ್ರೀ ಆಗಿ ಕೋಟಿಗಟ್ಟಲೆ ದುಡ್ಡು ರಾಜಕಾರಣಿಗಳಿಗೆ ಕೈ ಗೆ ಸಿಕ್ಕಾಗ ಅವರು ಹೇಗೆ ಖರ್ಚು ಮಾಡಬೇಕೆಂದು ಕೂಡ ಅರ್ಥ ಆಗುವುದುದಿಲ್ಲ ಅವರಿಗೆ,
ಆಗ ಅವರು BMW, Lamborghini, ಅಂತಹ ಕೋಟಿಗಟ್ಟಲ್ಲೇ ಬೆಲೆ ಬಾಳುವ ಕಾರುಗಳನ್ನೂ ಖರೀದಿಸಿ ವಿದೇಶಿ ಕಂಪನಿಗಳಿಗೆ ದುಡ್ಡು ಜಮಾ ಮಾಡುತ್ತಾರೆ,
ಅಥವಾ CD ಫಿಲಂ ಗಳನ್ನು ನಿರ್ಮಾಣ ಮಾಡಲು ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ, ಇಲ್ಲವಾ ಮಾಧ್ಯಮ ಗಳಿಗೆ ಹಣ ನೀಡಿ ಪ್ರತಿ ದಿನ ಅವರ ಬಗ್ಗೆ ಒಳ್ಳೆಯದನ್ನೇ ಪ್ರಸಾರ ಮಾಡುವಂತೆ ಮಾಡುತ್ತಾರೆ.
ನಿಜವಾದ ಪ್ರಜೆಗಳು ಸೈಕಲ್, ಹೋಂಡಾ ಆಕ್ಟಿವಾ, ಅಥವಾ ನಡೆದುಕೊಂಡು ತಿರುಗುತ್ತಾರೆ. ಇದೆ ಭಾರತದ ಪ್ರಜೆಗಳ ವೈಶಿಷ್ಟ್ಯ.
ನಮ್ಮ ದೇಶದಲ್ಲಿ ಬುದ್ದಿವಂತರು ಇದ್ದಾರೆ, ಆದರೆ ಅವರ ಸಂಖ್ಯೆಗಿಂತ ದಡ್ಡರ ಸಂಖ್ಯೆ ಹೆಚ್ಚಾಗಿದೆ. ಆ ದಡ್ಡರನ್ನು ಕೆಲವೇ ಬುದ್ದಿವಂತ ಜನ, ಅದೇ ರಾಜಕಾರಣಿಗಳು ಆಟ ಆಡಿಸುತ್ತಿದ್ದಾರೆ.
ಯೋಚಿಸಬೇಕಾದ ವಿಷಯ ಅಲ್ಲವೇ ? ಅದಕ್ಕೆ ಪ್ರಜೆಗಳು ತಲೆ ಓಡಿಸಿ ಮತಹಾಕಿ
ಅಂಥದ್ರಲ್ಲಿ ಇಂದು ಡಿ ಕೆ ಶಿವಕುಮಾರ್ ಅವರು ರಾಜ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಜೆ ಪಿ ನಡ್ಡಾ, ನಳಿನ್ ಕುಮಾರ್ ಕಟೀಲ್ ಹಾಗೂ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಹಾಯ್ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೂಡಲೇ ಅವರೆಲ್ಲರನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದು ಹೇಳಿದ್ದಾರೆ.