ಒಂದು ಕಡೆ ಖುಷಿ ಆಗ್ತಾ ಇದೆ. ಮತ್ತೊಂದು ಕಡೆ ದುಃಖ ಆಗ್ತಾ ಇದೆ. ನಮ್ಮ ರಾಜಕಾರಣಿಗಳು ಎಷ್ಟು ಆಕ್ಟಿವ್ ಆಗಿದರೆ ಅಂದ್ರೆ ಪ್ರಧಾನಿ ನರೇಂದ್ರ ಮೋದಿಜಿಯವರ ತರಾ ಆಕ್ಟಿವ್ ಆಗಿದ್ದಾರೆ.
ಪ್ರಧಾನಿ ಯವರು ದಿನಾಲೂ ಆಕ್ಟಿವ್ ಇರ್ತಾರೆ ಆದ್ರೆ ಇವ್ರು ಮಾತ್ರ ಚುನಾವಣೆ ೩ ತಿಂಗಳು ಇದ್ದಾಗ ಮಾತ್ರ ನಿದ್ದೆಯಿಂದ ಎದ್ದು ಕೆಲಸ ಮಾಡೋದು. ಈ ೫ ವರ್ಷದಲ್ಲಿ ಏನು ಮಾಡ್ತಾ ಇದ್ರಿ. ಒಬ್ಬರನ್ನ ಮತ್ತೊಬ್ರು ಬೈಯೋದು. ಅವ್ರನ್ನ ಇವ್ರು ಬೈಯೋದು.
ಮಾಧ್ಯಮಗಳು ಕಟ್ ಮಾಡಿ 2 ನಿಮಿಷದ ವಿಡಿಯೋ ಮಾಡಿ ಯೂಟ್ಯೂಬ್ ಅಲ್ಲಿ ಹಾಕೋದು. ಜನ ಅದನ್ನ ನೋಡಿ Views ಜಾಸ್ತಿ ಮಾಡೋದು ಇದೆ ಆಗ್ಬಿಟ್ಟಿದೆ. YouTube ನವರು ಅವರಿಗೆ ಸಿಲ್ವರ್ , Gold Play Button ಕೊಡೊದು. ಅವರು ಹೇಳಿದ್ದನ್ನೇ ಹೇಳಿ ಊರ್ ತುಂಬಾ ಬಿತ್ತರಿಸೋದು.
೫ ವರ್ಷದಲ್ಲಿ ಬಾಯಿ ಮುಚ್ಕೊಂಡು ಅಭಿವೃದ್ಧಿ ಬಗ್ಗೆ ಮಾತಾಡೋಕೆ, ಡಿಬೇಟ್ ಮಾಡೋಕೆ ಆಗಲ್ವ ನಿಮಗೆ! ಅದು ಬಿಟ್ಟು CD, ರಾಸಲೀಲೆ, ಭ್ರಷ್ಟಾಚಾರ, ಕಳಪೆ ಕಾಮಗಾರಿ, ಪರ್ಸಂಟೇಜ್ ರಾಜಕಾರಣ ಮಾಡಿ ಈವಾಗ ಅಭಿವೃದ್ಧಿ ಕೆಲಸಗಳನ್ನ ತ್ವರಿತ ಗತಿಯಲ್ಲಿ ಮಾಡ್ತಿರಲ್ಲ .
ಮಧ್ಯದಲ್ಲಿ ಒಂದು ಪ್ರಶ್ನೆ
ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಆಗಿರೋ ತಾಲೂಕು ಯಾವುದು?
ಉತ್ತರ :- ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು
ಗೋಕಾಕಿನ ಫಾಲ್ಸ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಮಾಡಿದ್ದು ಹೇಗೆ?
ಜಲಪಾತದ ನಡುವೆ ಚೀನಾ ಮಾದರಿಯ ಗಾಜಿನ ಸೇತುವೆ ನಿರ್ಮಾಣ ಮಾಡುವ ಮೂಲಕ ವಿಶ್ವ ಪ್ರಸಿದ್ಧಪಡಿಸಲಾಯಿತು ಇದರಿಂದ ಪ್ರವಾಸೋದ್ಯಮ ಇಲಾಖೆಗೆ ಭರ್ಜರಿ ಆದಾಯ ಹರಿದು ಬರುತ್ತಿದೆ.
ನಮ್ಮ ಜನಗಳೋ ಶಾರ್ಟ್ ಮೆಮೊರಿ ಇರೋವರು. ನಿಮಗೆ ೫ ವರ್ಷದ ಘಟನೆಗಳ ನೆನಪು ಇರೋಲ್ಲ ನಿಮ್ ತಲೇಲಿ. ಸದ್ಯ ನಡೀತಾ ಇರೋದು ಮಾತ್ರ ನೆನಪು ಇಟ್ಕೊಂಡು ವೋಟ್ ಹಾಕ್ತಿರಾ!
ಮಧ್ಯದಲ್ಲಿ ಕೋಟು ಸೂಟ್ ಹಾಕೊಂಡು ಬಂದು ನೀವು ರಾಜಕಾರಣಿಯಾಗಬೇಕೇ ಈಗಲೇ ನಟನೆ ಮಾಡುವುದನ್ನು ಸುಳ್ಳು ಹೇಳುವುದನ್ನು ಕಲಿತುಕೊಳ್ಳಬೇಕೇ? ಇಂದೇ ನಮ್ಮ app ಡೌನ್ಲೋಡ್ ಮಾಡಿಕೊಂಡು ಲಕ್ಷ ಲಕ್ಷ ಹಣಗಳಿಸುವುದನ್ನು ತಿಳಿಯಿರಿ ಅಂತ ಜಾಹಿರಾತು ಬೇರೆ.
ಇನ್ನೊಂದು ಪಕ್ಷದವರ ಕಥೆ ಏನೆಂದ್ರೆ ಉಚಿತ ಅಕ್ಕಿ, ಉಚಿತ ವಿದ್ಯುತ್ ಎಲ್ಲವನ್ನು ಉಚಿತವಾಗಿ ಕೊಟ್ರೆ ದುಡಿಯೋದು ಯಾರು? ಉಚಿತ ಅಕ್ಕಿ ಕೊಟ್ರೆ ಗಡದ್ದಾಗಿ ತಿಂದು ದುಸ್ ಅಂತ ಮಲ್ಕೊಂಡು ನಿದ್ದೆ ಹೊಡೆಯೋರ ಸಂಖ್ಯೆ ಜಾಸ್ತಿ ಆಗ್ತಿದೆ. ಉಚಿತ ವಿದ್ಯುತ್ ಕೊಟ್ರೆ ರಾತ್ರಿ ಹಗಲು ಅನ್ನದೇ ಲೈಟ್ ( ವಿದ್ಯುತ್ ದೀಪ ) ಹಾಕ್ತಾರೆ, ನಮ್ಮ ಜನ. ಆಮೇಲೆ ಹೆಸ್ಕಾಂ, ಬೆಸ್ಕಾಂ, ಚೆಸ್ಕಾಂ,ಗುವಿಕಂ ಎಲ್ಲಾ ಹೊಗೆನೆ. ಕೊನೆಗೆ ಸುಟ್ಟು ಕರಕಲು.
ಅದು ಬಿಟ್ಟು ಜನರ ತೆರಿಗೆ ಹಣವನ್ನ ಹೇಗೆ ಮಿತಬಳಕೆ ಸದ್ಬಳಕೆ ಮಾಡಬೇಕು ಎಂದು ಯೋಚಿಸೋ ಪಕ್ಷ ಯಾವುದು ಅನ್ನೋದನ್ನ ತಿಳಿದು ವೋಟ್ ಹಾಕಿ ಮತ ಬಾಂಧವರೇ.
ಕಾನೂನು ಸುವ್ಯವಸ್ಥೆಯನ್ನ ಗೃಹ ಇಲಾಖೆಯ ಜವಾಬ್ದಾರಿ ಕಾಪಾಡೋ ಪಕ್ಷಗಳಿಗೆ ವೋಟ್ ಹಾಕಿ. ಸರಿಯಾಗಿ ವಿದ್ಯುತ್ , ಸಕಾಲಕ್ಕೆ ನೀರು ಕೊಡೊ ಪಕ್ಷಗಳಿಗೆ ವೋಟ್ ಹಾಕಿ.
ಬ್ರಷ್ಟಚಾರಿಗಳನ್ನ ಮಟ್ಟ ಹಾಕೋ ಪಕ್ಷಕ್ಕೆ ವೋಟ್ ಹಾಕಿ, ಪೋಲೀಸರ ದಾದಾಗಿರಿಗೆ ಬ್ರೇಕ್ ಹಾಕೋ ಪಕ್ಷಗಳಿಗೆ ವೋಟ್ ಹಾಕಿ. ಹಳಿತಪ್ಪುವ ಸರ್ಕಾರವನ್ನ ಪ್ರಶ್ನೆ ಮಾಡೋ ನಾಯಕರಿಗೆ ವೋಟ್ ಹಾಕಿ. ಅದು ಬಿಟ್ಟು ೫ ವರ್ಷ ಎಲ್ಲೋ ಮೂಲೆ ಸಂದಿ ಯಲ್ಲಿ ಕುಳಿತು ಈವಾಗ ಪ್ರತ್ಯಕ್ಷರಾಗೋ ಜನರಿಗೆ ಮತ ಹಾಕ್ತಿರಲ್ಲ. ಬುದ್ದಿ ಇಲ್ವಾ ಕರ್ನಾಟಕದ ಜನರಿಗೆ.
KRS ( ಕರ್ನಾಟಕ ರಾಷ್ಟ್ರ ಸಮಿತಿ ) ಅನ್ನೋ ಪಕ್ಷದವರು ರಾತ್ರಿ ಹಗಲು ಎನ್ನದೇ ಬ್ರಷ್ಟಾಚಾರಗಳನ್ನ ಬಯಲಿಗೆ ಎಳೆದು ಅಧಿಕಾರಿಗಳಿಗೆ ನಡುಕ ಹುಟ್ಟಿಸಿ, ಜನಸಾಮಾನ್ಯರಲ್ಲಿ ಒಂದು ಭರವಸೆ ಉಂಟು ಮಾಡಿದ್ದಾರೆ. ಕರ್ನಾಟಕದ ಜನರ ಹಿತ ಕಾಯೋದಿಕ್ಕೆ ಸಿದ್ದ ಅಂತ ಹೋರಾಟ ಮಾಡ್ತಿದಾರೆ. ಆದರೆ ಅವರ ಪಕ್ಷದ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಬೇಕಾದಸ್ಟು ಆಗ್ತಿಲ್ಲ . ಅವರ ಬೆಂಬಲಕ್ಕೆ ನಿಲ್ಲೋಣ.
ಹಾಗಂತ ನಾನು ಮೋದಿಜಿ ಅವರು ಒಳ್ಳೆ ಕೆಲಸ ಮಾಡ್ತಿಲ್ಲ ಅಂತ ಹೇಳ್ತಿಲ್ಲ. ಅವ್ರು 5G ರೀತಿ ವೇಗವಾಗಿದ್ದಾರೆ. ಅವ್ರು ಒನ್ ಮ್ಯಾನ್ ಆರ್ಮಿ. ದೂರದೃಷ್ಟಿ ಹೊಂದಿರೋ ನಾಯಕ. ಆದ್ರೆ ನಮ್ಮ ರಾಜ್ಯದ ಬಹುತೇಕ ರಾಜಕಾರಣಿಗಳು ಪ್ರಜ್ಞಾ ಹೀನರು ಅನ್ನೋದಕ್ಕಿಂತ ಸ್ವಾರ್ಥಿಗಳು ಅಂದ್ರೆ ತಪ್ಪಿಲ್ಲ.
ಏನಂತೀರಾ ಫ್ರೆಂಡ್ಸ್ ?